Popular Topics Aviation International News Job & Education Updates Sports News Business Trends
---Advertisement---

ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Karnataka Agriculture Department Recruitment 2026 Apply Online For AO & AAO Posts

Karnataka Agriculture Department Recruitment 2026
---Advertisement---

ಕರ್ನಾಟಕ ಕೃಷಿ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ (KK) ಹಾಗೂ ಉಳಿಕೆ ಮೂಲ ವೃಂದದಲ್ಲಿ (RPC) ಖಾಲಿ ಇರುವ ಗ್ರೂಪ್-ಬಿ ವೃಂದದ ‘ಕೃಷಿ ಅಧಿಕಾರಿ’ ಹಾಗೂ ‘ಸಹಾಯಕ ಕೃಷಿ ಅಧಿಕಾರಿ’ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪರಿಷ್ಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

ಈ ಹಿಂದೆ ಏಪ್ರಿಲ್ 18ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದು, ಇದೀಗ ಸರ್ಕಾರದ ಹೊಸ ಆದೇಶದನ್ವಯ ಒಳಮೀಸಲಾತಿಯನ್ನು ಅಳವಡಿಸಿಕೊಂಡು ಒಟ್ಟು 945 ಹುದ್ದೆಗಳಿಗೆ ಈ ಪ್ರಕಟಣೆ ನೀಡಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕೃಷಿ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಅಂದರೆ ಜೂನ್ 20, 2026 ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಮಾಹಿತಿಯನ್ನು ಯಾವುದೇ ಹಂತದಲ್ಲಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ, ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಿ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) / ಕೃಷಿ ಇಲಾಖೆ
  • ವೇತನ ಶ್ರೇಣಿ: 65,950 ರೂ. ನಿಂದ 134,200 ರೂ. ವರೆಗೆ
  • ಹುದ್ದೆಗಳ ಸಂಖ್ಯೆ: 945 ಹುದ್ದೆಗಳು
  • ಉದ್ಯೋಗ ಸ್ಥಳ: ಕರ್ನಾಟಕ

Karnataka Agriculture Department Recruitment 2026 ಹುದ್ದೆಗಳ ವಿವರ:

ಹುದ್ದೆಯ ಹೆಸರುಕಲ್ಯಾಣ ಕರ್ನಾಟಕ ವೃಂದ (HK)ಉಳಿಕೆ ಮೂಲ ವೃಂದ (RPC)ಒಟ್ಟು ಹುದ್ದೆಗಳು
ಕೃಷಿ ಅಧಿಕಾರಿ (AO)4286128
ಸಹಾಯಕ ಕೃಷಿ ಅಧಿಕಾರಿ (AAO)231586817
ಒಟ್ಟು273672945

ಶೈಕ್ಷಣಿಕ ಅರ್ಹತೆ: ಶೇ.85 ರಷ್ಟು ಹುದ್ದೆಗಳಿಗೆ ಭಾರತದ ಕಾನೂನು ರೀತ್ಯಾ ಮತ್ತು ICAR ಅಥವಾ AICTE ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್‌ಸ್ಸಿ (ಕೃಷಿ) ಅಥವಾ ಬಿಎಸ್‌ಸ್ಸಿ (ಆನರ್ಸ್) ಕೃಷಿ ಪದವಿ ಹೊಂದಿರಬೇಕು. ಉಳಿದ ಶೇ.15 ರಷ್ಟು ಹುದ್ದೆಗಳಿಗೆ ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಟೆಕ್ (ಆಹಾರ ತಂತ್ರಜ್ಞಾನ), ಬಿಎಸ್‌ಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ), ಬಿಎಸ್‌ಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ), ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್) ಅಥವಾ ತತ್ಸಮಾನ ಪದವಿ ಪಡೆದಿರಬೇಕು.

ವೇತನ ಶ್ರೇಣಿ:

  • ಕೃಷಿ ಅಧಿಕಾರಿ ಹುದ್ದೆಗಳಿಗೆ: 69,250 ರೂ. ನಿಂದ 134,200 ರೂ. ವರೆಗೆ.
  • ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ: 65,950 ರೂ. ನಿಂದ 124,900 ರೂ. ವರೆಗೆ.

ವಯೋಮಿತಿ: ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರತಕ್ಕದ್ದು.

ವಯೋಮಿತಿ ಸಡಿಲಿಕೆ: (ಸರ್ಕಾರದ ಆದೇಶದನ್ವಯ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ)

  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: 40 ವರ್ಷಗಳು.
  • ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 43 ವರ್ಷಗಳು.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ: 45 ವರ್ಷಗಳು.
  • ವಿಶೇಷ ಚೇತನ ಹಾಗೂ ವಿಧವೆ ಅಭ್ಯರ್ಥಿಗಳಿಗೆ: 10 ವರ್ಷಗಳ ಹೆಚ್ಚುವರಿ ಸಡಿಲಿಕೆ.
  • ಮಾಜಿ ಸೈನಿಕರಿಗೆ: ಸೇವೆ ಸಲ್ಲಿಸಿದ ಅವಧಿಯ ಜೊತೆಗೆ 3 ವರ್ಷಗಳ ರಿಯಾಯಿತಿ.

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ: 750 ರೂ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ: 500 ರೂ.
  • ವಿಶೇಷ ಚೇತನ ಅಭ್ಯರ್ಥಿಗಳಿಗೆ: 250 ರೂ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-05-2026
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-06-2026
ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 22-06-2026

ಪ್ರಮುಖ ಲಿಂಕ್’ಗಳು:
ಅಧಿಸೂಚನೆ (RPC): ಡೌನ್’ಲೋಡ್
ಅಧಿಸೂಚನೆ (HK): ಡೌನ್’ಲೋಡ್
ಆನ್‌ಲೈನ್ ಅರ್ಜಿ (RPC): Apply ಮಾಡಿ
ಆನ್‌ಲೈನ್ ಅರ್ಜಿ (HK): Apply ಮಾಡಿ
ಅಧಿಕೃತ ವೆಬ್ ಸೈಟ್: cetonline.karnataka.gov.in/kea/

Krishn Guru

is a seasoned multi-niche content writer and digital journalist with 12 years of experience covering breaking news, technology updates, automobile trends, astrology insights, finance guidance, and job recruitment alerts. Known for accuracy, clarity, and reader-focused reporting, they simplify complex topics into trustworthy, easy-to-understand content. Their work is dedicated to keeping readers informed, empowered, and prepared for real-world decisions.

Join WhatsApp

Join Now

Join Telegram

Join Now