ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3,991 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ (KSP Civil Constable Recruitment 2026) ಯನ್ನು ಪ್ರಕಟಿಸಲಾಗಿದೆ.
ಕಲ್ಯಾಣ ಕರ್ನಾಟಕ (KK) ಹಾಗೂ ಉಳಿಕೆ ಮೂಲ ವೃಂದದಲ್ಲಿನ (RPC) ಈ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿರುವ ಕೊನೆಯ ದಿನಾಂಕವಾದ ಜುಲೈ 03, 2026ರ ಒಳಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ದೈಹಿಕ ಅರ್ಹತೆ, ವೇತನ ಶ್ರೇಣಿ ಹಾಗೂ ಪ್ರಮುಖ ದಿನಾಂಕಗಳ ವಿಸ್ತೃತ ಮಾಹಿತಿ ಈ ಕೆಳಗಿನಂತಿದೆ.
KSP Civil Police Constable Recruitment 2026 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ನೇಮಕಾತಿ ಇಲಾಖೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP)
- ಹುದ್ದೆಯ ಹೆಸರು: ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್)
- ಒಟ್ಟು ಹುದ್ದೆಗಳು: 3,991 ಹುದ್ದೆಗಳು
- ವೇತನ ಶ್ರೇಣಿ: 37,500 ರೂ. ರಿಂದ 76,100 ರೂ. ವರೆಗೆ
- ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವರ್ಗೀಕರಣದ ವಿವರ:
ಕಲ್ಯಾಣ ಕರ್ನಾಟಕ (KK) ವೃಂದದ 596 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದದ (RPC) 3395 ಹುದ್ದೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:
| ಹುದ್ದೆಯ ವಿವರ | ಕಲ್ಯಾಣ ಕರ್ನಾಟಕ (KK) | ಉಳಿಕೆ ಮೂಲ (RPC) | ಒಟ್ಟು ಹುದ್ದೆಗಳು |
| ನೇರ ಪುರುಷ | 398 | 2266 | 2664 |
| ನೇರ ಮಹಿಳಾ | 133 | 755 | 888 |
| ಸೇವಾನಿರತ ಪುರುಷ | 46 | 257 | 303 |
| ಸೇವಾನಿರತ ಮಹಿಳಾ | 14 | 82 | 96 |
| ತೃತೀಯ ಲಿಂಗ ಅಭ್ಯರ್ಥಿಗಳು | 5 | 35 | 40 |
| ಒಟ್ಟು ಹುದ್ದೆಗಳ ಸಂಖ್ಯೆ | 596 | 3395 | 3991 |
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ತತ್ಸಮಾನ ವಿದ್ಯಾರ್ಹತೆಯಡಿ ಸಿ.ಬಿ.ಎಸ್.ಇ (CBSE) ಮತ್ತು ಐ.ಎಸ್.ಸಿ (ISC) ಮಂಡಳಿ ನಡೆಸುವ 12ನೇ ತರಗತಿ, 3 ವರ್ಷಗಳ ಡಿಪ್ಲೊಮಾ, 2 ವರ್ಷಗಳ ಐ.ಟಿ.ಐ (ಒಂದು ಭಾಷಾ ಕೋರ್ಸ್‌ನೊಂದಿಗೆ) ಹಾಗೂ ಎನ್.ಐ.ಓ.ಎಸ್ (NIOS) ನ ಉನ್ನತ ಪ್ರೌಢ ಶಿಕ್ಷಣ ಕೋರ್ಸ್‌ಗಳನ್ನು ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಟ 18 ವರ್ಷಗಳು ತುಂಬಿರಬೇಕು. ಸರ್ಕಾರದ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು, ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ: 33 ವರ್ಷಗಳು.
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 35 ವರ್ಷಗಳು.
- ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ: 38 ವರ್ಷಗಳು.
- ಸೇವಾನಿರತ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳು ಹಾಗೂ ಇತರೆ ಪ್ರವರ್ಗದ ಸೇವಾನಿರತ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ಇರುತ್ತದೆ.
ದೇಹದಾರ್ಡ್ಯತೆ ಪರೀಕ್ಷೆಯ (PST) ಮಾನದಂಡಗಳು:
- ಪುರುಷ ಅಭ್ಯರ್ಥಿಗಳಿಗೆ: ಕನಿಷ್ಠ 168 ಸೆಂ.ಮೀ ಎತ್ತರವಿರಬೇಕು. ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ ಇದ್ದು, ಪೂರ್ತಿ ವಿಸ್ತರಿಸಿದಾಗ 5 ಸೆಂ.ಮೀ.ಗಳ ಕನಿಷ್ಠ ವಿಸ್ತರಣೆ ಇರಬೇಕು.
- ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ಕನಿಷ್ಠ ಎತ್ತರ 157 ಸೆಂ.ಮೀ. ಹಾಗೂ ಕನಿಷ್ಠ ತೂಕ 45 ಕೆ.ಜಿ. ಇರತಕ್ಕದ್ದು.
ಆಯ್ಕೆ ಪ್ರಕ್ರಿಯೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಒಟ್ಟು 100 ಅಂಕಗಳ OMR ಮಾದರಿಯ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ (Negative Marking). ಲಿಖಿತ ಪರೀಕ್ಷೆಯಲ್ಲಿ 1:5ರ ಅನುಪಾತದಡಿ ಅರ್ಹಗೊಂಡ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ (Endurance) ಹಾಗೂ ದೇಹದಾರ್ಡ್ಯತೆ ಪರೀಕ್ಷೆಗಳನ್ನು ನಡೆಸಲಾಗುವುದು. ಅಂತಿಮವಾಗಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಖಾಲಿ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
ಅರ್ಜಿ ಶುಲ್ಕದ ವಿವರ:
- ಸಾಮಾನ್ಯ ಅರ್ಹತೆ ಹಾಗೂ ಇತರೆ ಪ್ರವರ್ಗಗಳ (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ: ರೂ. 750/-.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ರೂ. 500/-.
- (ಸೂಚನೆ: ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕಾಗಿದ್ದು, ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ) .
KSP Civil Police Constable Recruitment 2026 ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 08-06-2026.
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-07-2026.
- ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 04-07-2026.
- ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 02-08-2026.
KSP PC Recruitment 2026 Application Link ಮತ್ತು ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ (ಉಳಿಕೆ ಮೂಲ ವೃಂದ – RPC): ಡೌನ್’ಲೋಡ್
- ಅಧಿಸೂಚನೆ (ಕಲ್ಯಾಣ ಕರ್ನಾಟಕ – KK): ಡೌನ್’ಲೋಡ್
- ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್: ಶೀಘ್ರದಲ್ಲೇ ಬಿಡುಗಡೆ
- ಹಾಗೂ ಅಧಿಕೃತ ವೆಬ್ಸೈಟ್: https://cetonline.karnataka.gov.in/kea/